Connect with us

ಅಂತಾರಾಷ್ಟ್ರೀಯ ಸುದ್ದಿ

ಭಾರತದಿಂದ ಹಲವಾರು ವಿಚಾರಗಳನ್ನು ಕಲಿಯಬೇಕಿದೆ ಎಂದು ಸಲಹೆ ನೀಡಿದ ಚೀನಾ ಮಾಧ್ಯಮ

ಈ ಸುದ್ದಿಯನ್ನು ಶೇರ್ ಮಾಡಿ

ಭಾರತದ ವಿಶೇಷ ಆಚರಣೆ ಸೇರಿದಂತೆ ಸಂಸ್ಕೃತಿ ವಿದೇಶಿ ಜನರನ್ನು ಸೆಳೆಯುತ್ತಲೇ ಹೊಸ ಆಯಾಮ ಪಡೆಯುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಮತ್ತೊಂದೆಡೆ ಮಿಲಿಟರಿ ಹಾಗೂ ಆರ್ಥಿಕತೆ ವಿಚಾರದಲ್ಲಿ ಹೆಚ್ಚಿನ ಪ್ರಭುತ್ವ ಹೊಂದಿರುವ ಚೀನಾಗೆ ಅಲ್ಲಿನ ಮಾದ್ಯಮವೇ ಭಾರತದಿಂದ ಹಲವಾರು ವಿಚಾರಗಳನ್ನು ಕಲಿಯಬೇಕಿದೆ ಎಂದು ಸಲಹೆ ನೀಡಿದೆ.

ಕಳೆದ ಮೂರು ವರ್ಷಗಳಿಂದ ಯೋಗಕ್ಕೆ ಜಾಗತಿಕ ಮಟ್ಟದಲ್ಲಿ ಮಾನ್ಯತೆ ದೊರೆತ ಬೆನ್ನಲ್ಲೇ ಯೋಗವನ್ನು ಹಲವಾರು ರಾಷ್ಟ್ರಗಳು ಅಳವಡಿಸಿಕೊಳ್ಳುತ್ತಾ ಬರತೊಡಗಿದ್ದವು. ಅಲ್ಲದೇ ಯೋಗ ಹಾಗೂ ಬಾಲಿವುಡ್‌ನ ಹಲವಾರು ಚಿತ್ರಗಳು ಚೀನಾ ಮಾಧ್ಯಮ, ಚೀನಾ ಯುವಜನತೆ ಮೇಲೆ ಪ್ರಭಾವ ಭೀರತೊಡಗಿದೆ ಎಂದು ಅಲ್ಲಿನ ಸರಕಾರಿ ಒಡೆತನದ ಮಾಧ್ಯಮ ಗ್ಲೋಬಲ್‌ ಟೈಮ್ಸ್‌ ಹೇಳಿಕೊಂಡಿದೆ.

ಚೀನಾ ಆರ್ಥಿಕತೆ ಹಾಗೂ ಮಿಲಿಟರಿ ವ್ಯವಸ್ಥೆಯಲ್ಲಿ ಭಾರತವನ್ನು ಹಿಂದಿಕ್ಕಿ ಸಾಧನೆ ಮಾಡಿರಬಹುದು, ಭಾರತ ಇದ್ಯಾವುದಕ್ಕೂ ತಲೆ ಕೆಡಿಸಿದರೆ ತನ್ನದೇ ಆದ ಸಂಸ್ಕೃತಿ ಹಾಗೂ ಆಚರಣೆಯಿಂದ ಜಗತ್ತನ್ನು ಗೆಲ್ಲುತ್ತಲೇ ಹೊರಡುತ್ತಿದೆ. ಇದಕ್ಕೆ ಪೂರಕ ಉದಾಹರಣೆಯೆಂದರೆ ಭಾರತದ ಯೋಗ ಹಾಗೂ ಅಲ್ಲಿನ ಬಾಲಿವುಡ್‌ ಸಿನಿಮಾಗಳು. ಇವು ಸಾಗರೋತ್ತರ ಚೀನಾ ಸರ್ಕಾರದ-ಬೆಂಬಲ ಕಾರ್ಯಕ್ರಮಗಳಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿದ್ದು ಈ ರೀತಿಯ ಬದಲಾವಣೆ ಚೀನಾ ಅಳವಡಿಸಿಕೊಳ್ಳಬೇಕಿದೆ ಎಂದು ಗ್ಲೋಬಲ್‌ ಟೈಮ್ಸ್‌ ಹೇಳಿದೆ.

ಎರಡು ವರ್ಷಗಳಿಂದೀಚೆಗೆ ಚೀನಾದಲ್ಲಿ ಯೋಗ ಕ್ಲಬ್‌ಗಳು ಹೇರಳವಾಗಿ ಬೆಳೆಯುತ್ತಿವೆ, ಮಳೆಗಾಲದ ಬಳಿಕ ಬರುವ ಅಣಬೆಗಳಂತೆ ಚೀನಾದಲ್ಲಿ ಯೋಗ ಕ್ಲಬ್‌ಗಳು ತಲೆಯೆತ್ತಿವೆ. ‘ಚೀನಾದಲ್ಲಿನ ಕೆಲವು ನಗರಗಳಲ್ಲಿ ಶಾಲೆಗಳು ಯೋಗವನ್ನು ಕಲಿಸಲು ಮುಂದಾಗಿವೆ. ಈಶಾನ್ಯ ಚೀನಾದ ಲಿಯಾನಿಂಗ್ ಪ್ರಾಂತ್ಯದ ಶೆನ್ಯಾಂಗ್‌ನಲ್ಲಿನ ಪ್ರಾಥಮಿಕ ಶಾಲೆಯು ಬೆಳಿಗ್ಗೆ ವ್ಯಾಯಾಮದ ಸಮಯದಲ್ಲಿ ಯೋಗವನ್ನು ಮಕ್ಕಳಿಗೆ ಹೇಳಿಕೊಡುತ್ತಿದೆ ಎಂದು ಚೀನಾದ ಇಂಟರ್‌ನೆಟ್‌ ಕಂಪನಿಯೊಂದು ಹೇಳಿದೆ.

ಅಮೆರಿಕ ಅಥವಾ ಯುರೋಪಿಯನ್‌ ಸಿನಿಮಾಗಳ ರೀತಿಯಲ್ಲಿ ಬಾಲಿವುಡ್‌ ಸಿನಿಮಾಗಳು ಇಲ್ಲದೇ ಇರುವುದು ಕೂಡಾ ಚೀನಾದಲ್ಲಿ ಈ ಚಿತ್ರಗಳು ಹೆಚ್ಚಿನ ಯಶಸ್ಸು ಕಾಣಲು ಸಾಧ್ಯವಾಗಿದೆ. ಸಲ್ಮಾನ್‌ ಖಾನ್‌ ಅಭಿನಯದ ಭಜರಂಗಿ ಭಾಯ್‌ಜಾನ್‌ ಚಿತ್ರ ಬೀಜಿಂಗ್‌ನ ಎಲ್ಲಾ ಸಿನಿಮಾ ಮಂದಿರದಲ್ಲಿ ಇನ್ನೂ ಪ್ರದರ್ಶನಗೊಳ್ಳುತ್ತಲೇ ಇದೆ. ‘ ಸಾಮಾಜಿಕ ಸಮಸ್ಯೆಗಳ ಕುರಿತು ವಿಶೇಷ ಮಾದರಿಯಲ್ಲಿ ಸಿನಿಮಾಗಳನ್ನು ರೂಪಿಸಿರುವುದರಿಂದ ನಮ್ಮ ಜನರು ಇದರ ಕಡೆ ಹೆಚ್ಚು ಆಕರ್ಷಣೆಗೊಳಗಾಗಿದ್ದಾರೆ ಎಂದು ಶಾಂಘೈ ಇನ್ಸ್ಟಿಟ್ಯೂಟ್ಸ್ ಫಾರ್ ಇಂಟರ್‌ನ್ಯಾಷನಲ್ ಸ್ಟಡೀಸ್‌ಲ್ಲಿರುವ ಏಷ್ಯಾ-ಪೆಸಿಫಿಕ್ ಅಧ್ಯಯನದ ಕೇಂದ್ರದ ನಿರ್ದೇಶಕ ಝಾವೊ ಗ್ಯಾನ್ಚೆಂಗ್ ಹೇಳಿರುವುದನ್ನು ಗ್ಲೋಬಲ್‌ ಟೈಮ್ಸ್‌ ಉಲ್ಲೇಖಿಸಿದೆ
-ವಿಜಯಕರ್ನಾಟಕ

Click to comment

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

More in ಅಂತಾರಾಷ್ಟ್ರೀಯ ಸುದ್ದಿ

To Top