ಪೋಷಕರ ವಿರೋಧದ ನಡುವೆಯೂ ಹಿಂದೂ ಯುವತಿಯೊಬ್ಬಳು ಮುಸ್ಲಿಂ ಯುವಕನನ್ನು ಮದುವೆಯಾದ ಕೊನೆಗೆ ಪತಿಯ ತಂದೆ ಹಾಗೂ ಚಿಕ್ಕಪ್ಪನಿಂದ ಸಾಮೂಹಿಕ ಅತ್ಯಾಚಾರಕ್ಕೆ ಬಲಿಯಾಗಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ರಾಂಚಿ ಪೋಷಕರ ವಿರೋಧದ ನಡುವೆಯೂ ಹಿಂದೂ ಯುವತಿಯೊಬ್ಬಳು ಮುಸ್ಲಿಂ ಯುವಕನನ್ನು ಮದುವೆಯಾಗಿ ಕೊನೆಗೆ ಪತಿಯ ತಂದೆ ಹಾಗೂ ಚಿಕ್ಕಪ್ಪನಿಂದ ಸಾಮೂಹಿಕ ಅತ್ಯಾಚಾರಕ್ಕೆ ಬಲಿಯಾಗಿ ನಂತರ ಬರ್ಭರವಾಗಿ ಹತ್ಯೆಯಾಗಿರುವ ಘಟನೆ ಜಾರ್ಖಂಡ್ ನ ರಾಮಗಢದಲ್ಲಿ ನಡೆದಿದೆ.

ಮದುವೆ ನಂತರ ಇಸ್ಲಾಂಗೆ ಮತಾಂತರಗೊಳ್ಳುವಂತೆ ಯುವತಿಗೆ ಪತಿಯ ತಂದೆ ಹಾಗೂ ಚಿಕ್ಕಪ್ಪ ಬಲವಂತ ಮಾಡಿದ್ದಾರೆ. ಇದಕ್ಕೆ ಆಕೆ ಒಪ್ಪದಿದ್ದಾಗ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ನಂತರ ಆಕೆಯನ್ನು ಕೊಂದು ಆಕೆಯ ಶವವನ್ನು ಅರಣ್ಯದಲ್ಲಿ ಎಸೆದು ಬಂದಿದ್ದರು.

Loading...

ಕಳೆದ ನವೆಂಬರ್ 6ರಂದು ಮೃತಪಟ್ಟಿರುವ ಹಿಂದೂ ಮಹಿಳೆ ನಾಪತ್ತೆಯಾಗಿದ್ದಳು. ಈ ಘಟನೆ ನಡೆದು ತಿಂಗಳುಗಳ ನಂತರ ಆಕೆಯ ಮೃತದೇಹ ಹಗ್ಗದಿಂದ ಕೈ ಕಾಲು ಬಿಗಿಯಲ್ಪಟ್ಟ ಸ್ಥಿತಿಯಲ್ಲಿ ಗರ್ನಾ ನದೀ ಕಿನಾರೆಯಲ್ಲಿ ಪತ್ತೆಯಾಗಿತ್ತು. ನಂತರ ತನಿಖೆ ಕೈಗೊಂಡ ಪೊಲೀಸರು ಮೊದಲಿಗೆ ಹಿಂದೂ ಮಹಿಳೆ ಮದುವೆಯಾಗಿದ್ದ ಮುಸ್ಲಿಂ ಯುವಕ ಆದಿಲ್ ನನ್ನು ಬಂಧಿಸಿ ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ಆದಿಲ್ ಹಲವು ಆಘಾತಕಾರಿ ಸಂಗತಿಗಳನ್ನು ಬಾಯ್ಬಿಟ್ಟಿದ್ದಾನೆ.

ಪೊಲೀಸರ ಪ್ರಕಾರ, ಸಾಮೂಹಿಕ ಅತ್ಯಾಚಾರ, ಕೊಲೆಗೀಡಾದ ಹಿಂದೂ ಮಹಿಳೆಯು ಪೋಷಕರ ವಿರೋಧದ ನಡುವೆಯು ಮುಸ್ಲಿಂ ಯುವಕ ಆದಿಲ್ ನನ್ನು ವಿವಾಹವಾಗಿದ್ದಳು. ನಂತರ ನವ ದಂಪತಿ ಆದಿಲ್ ನ ಚಿಕ್ಕಪ್ಪನ ಮನೆಗೆ ಹೋಗಿದ್ದಾರೆ. ಅಲ್ಲಿ ಚಿಕ್ಕಪ್ಪ ಹಾಗೂ ಆದಿಲ್ ತಂದೆ ಇಬ್ಬರು ಯುವತಿಗೆ ಇಸ್ಲಾಂಗೆಮತಾಂತರಗೊಳ್ಳುವಂತೆ ಬಲವಂತ ಮಾಡಿದ್ದಾರೆ. ಇದಕ್ಕೆ ಯುವತಿ ಒಪ್ಪದಿದ್ದಾಗ ಆಕೆಯನ್ನು ಪತಿ ಸಮೇತ ರಾಂಚಿಗೆ ಕಳುಹಿಸಿಕೊಡಲು ತೀರ್ಮಾನಿಸಿದ್ದಾರೆ.

ಬಳಿಕ ನಾಲ್ವರು ಕಾರಿನಲ್ಲಿ ರಾಂಚಿಗೆ ತೆರಳುವಾಗ ಮಾರ್ಗ ಮಧ್ಯೆ ಮಾರ್ಗ ಬದಲಿಸಿದ ತಂದೆ-ಚಿಕ್ಕಪ್ಪ ನಿರ್ಜನ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಮೊದಲಿಗೆ ಆದಿಲ್ ನನ್ನು ಹಗ್ಗದಿಂದ ಕಟ್ಟಿ ಹಾಕಿ ನಂತರ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಬಳಿಕ ಆಕೆಯನ್ನು ಹತ್ಯೆ ಮಾಡಿ ಕೈಕಾಲು ಕಟ್ಟಿ ಅಲ್ಲೆ ಬಿಸಾಗಿ ಬಂದಿದ್ದರು. ಇದೀಗ ಆದಿಲ್ ನನ್ನು ವಶಕ್ಕೆ ಪಡೆದಿರುವ ಪೊಲೀಸರು ಪ್ರಮುಖ ಆರೋಪಿಗಳಾದ ಆದಿಲ್ ತಂದೆ-ಚಿಕ್ಕಪ್ಪನನ್ನು ಇನ್ನಷ್ಟೇ ಬಂಧಿಸಬೇಕಿದೆ.

ಘಟನೆ ಬಗ್ಗೆ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು ಸಿಬಿಐ ತನಿಖೆಗೆ ಆಗ್ರಹಿಸಿದೆ

Leave a Reply

This site uses Akismet to reduce spam. Learn how your comment data is processed.